Kala Vimarshe is a multidisciplinary Art and Creative writing devoted to developing and executing brand experiences for our constantly changing world.

ಶ್ರೀಪುರಂದರ ನಮನ…..

ದಾಸರೆಂದರೆ ಪುರಂದರ ದಾಸರಯ್ಯ…. ಇದೇ ಫೆಬ್ರವರಿ 2 2025 ದಿನದಂದು ಶಾಂತಲ ಆರ್ಟ್ಸ್ ಆಕಾಡೆಮಿ ಯ ಹಿರಿಯ ಕಲಾವಿದರಿಂದ ಶ್ರೀಪುರಂದರ ನಮನ ಎಂಬ ನೃತ್ಯ ನಾಟಕ ವನ್ನು ಮಲ್ಲೇಶ್ವರಂ ನ ಸೇವಾ ಸದನದಲ್ಲಿ ಹಮ್ಮಿಕೊಳ್ಳಲಾಗಿತ್ತು .ಗುರು ಕಲಾಯೋಗಿ ಪುಲಿಕೇಶಿ ಕಸ್ತೂರಿ ಯವರ ಮಾರ್ಗ ದರ್ಶನದಲ್ಲಿ ಅವರ ಹಿರಿಯ ಶಿಷ್ಯಂದಿರು ಸೇರಿ ಈ ನೃತ್ಯ ನಾಟಕವನ್ನು ಅದ್ಭುತವಾಗಿ ಪ್ರಸ್ತುತ ಪಡಿಸಿದರು.ಇದು ಪುರಂದರದಾಸರ ಜೀವನ ಚರಿತ್ರೆಯ ಆಧಾರಿತ ನೃತ್ಯ ನಾಟಕವಾಗಿದ್ದು ,ಸುಮಾರು 2 ಗಂಟೆಗಳ ಕಾಲ ನರ್ತಿಸಿದ ಸಮಯವಾಗಿತ್ತು. ಈ ನೃತ್ಯ ನಾಟಕದಲ್ಲಿ ಅಳವಡಿಸಿಕೊಂಡ ಪ್ರತಿಯೊಂದು ಪುರಂದರ ದಾಸರ ಪದ್ಯವೂ ಅಷ್ಟು ಅದ್ಭತವಾಗಿತ್ತು.ಗುರು ಪುಲಿಕೇಶಿ ಕಸ್ತೂರಿಯವರ ಮಾರ್ಗದರ್ಶನವಂತೂ ತುಂಬಾ ಸೊಗಸಾಗಿ ಮೂಡಿ ಬಂದಿದೆ.ಹಿನ್ನಲೆ ಗಾಯನದಲ್ಲಿ ಕರ್ನಾಟಕ ಕಲಾಶ್ರೀ D.S ಶ್ರೀ ವತ್ಸ.ಮೃದಂಗವಾದನದಲ್ಲಿ ವಿದ್ವಾನ್ ಜನಾರ್ದನ ರಾವ್. ಕೊಳಲು ವಾದನದಲ್ಲಿ ವಿದ್ವಾನ್ ಜಯರಾಮ್ ಕಿಕ್ಕೇರಿ ಯವರು.ಪಿಟೀಲು ವಾದನದಲ್ಲಿವಿದ್ವಾನ್ ಹೇಮಂತ ಕುಮಾರ್ ಅವರು ಹಾಗು ನಟ್ಟುವಾಂಗದಲ್ಲಿ ಶ್ರೀಮತಿ ವಿದುಷಿ ಲಕ್ಮಿರೇಖಾ ರವರು ನಡೆಸಿಕೊಟ್ಟು ಕಾರ್ಯಕ್ರಮದ ಘನತೆಯನ್ನು ಹೆಚ್ಚಿಸಿದರು.ಒಟ್ಟಿನಲ್ಲಿ ಪುರಂದರ ನಮನ ನೃತ್ಯ ನಾಟಕವು ನೋಡಿದ ಕಲಾ ರಸಿಕರ ಕಣ್ಮನ ತಂಪಾಗಿದೆ ಎಂದರೆ ಸೋಜಿಗದ ಮಾತಲ್ಲ….ದಾಸರೆಂದರೆ ಪುರಂದರ ದಾಸರಯ್ಯ

ಬೆಂಗಳೂರು ಅಂತಾರಾಷ್ಟ್ರೀಯ ಶಾಸ್ತ್ರೀಯ ನೃತ್ಯೋತ್ಸವ 2024.
ಅವಕಾಶಗಳ ಆಗರ ಶಾಂತಲ ಆರ್ಟ್ಸ್ ಅಕೇಡೆಮಿ , ಗುರು ಕಲಾಯೋಗಿ ಪುಲಿಕೇಶಿ ಕಸ್ತೂರಿ ಯವರ ಸಾರಥ್ಯದಲ್ಲಿ ಕಳೆದ ಡಿಸೆಂಬರ್ ತಿಂಗಳಿನಲ್ಲಿ (22, 23) ಬೆಂಗಳೂರು ಅಂತಾರಾಷ್ಟ್ರೀಯ ಶಾಸ್ತ್ರೀಯ ನೃತ್ಯೋತ್ಸವವನ್ನು ಮಲ್ಲೇಶ್ವರ ದ ಸೇವಾ ಸದನದಲ್ಲಿ ಹಮ್ಮಿಕೊಂಡಿದ್ದು,ವಿದುಷಿ ಶ್ರೀಮತಿ ಪುಸ್ತಕ೦ ರಮಾ ಅವರು ವಿದ್ಯುಕ್ತವಾಗಿ ಉದ್ಘಾಟಿಸಿದರು.ಅದರಲ್ಲಿ ಸುಮಾರು 10ಕ್ಕೂ ಹೆಚ್ಚು ವಿದೇಶದಲ್ಲಿ ನೆಲೆಸಿದ ಭಾರತೀಯ ನೃತ್ಯಾ ಸಕ್ತರಿಗೆ ಅವಕಾಶ ಕಲ್ಪಿಸಿ ಕೊಡಲಾಗಿತ್ತು. ಅದ್ಭುತನೆಂದರೆ ವಿದೇಶದಲ್ಲಿ ನೆಲೆಸಿದ ಭಾರತೀಯರು ನಮ್ಮ ಹೆಮ್ಮೆಯ ಸಂಸ್ಕೃತಿ ಯನ್ನು ಉಳಿಸಿ ಅದನ್ನು ಬೆಳೆ ಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.ಅಂದಿನ ಭರತ ನಾಟ್ಯ ಕಾರ್ಯಕ್ರಮ
ದಲ್ಲಿ ನರ್ತಿಸಿದ ಪ್ರತಿಯೊಂದು ಕಲಾವಿದರೂ ಬಹಳ ಅದ್ಭುತ ವಾಗಿ ನರ್ತಿಸಿ ತಮ್ಮ ಪ್ರತಿಭೆಯ ನ್ನು ಪ್ರದರ್ಶಿಸಿದರು…ಮತ್ತು ಎಲ್ಲಾ ಕಲಾವಿದರದ್ದು ಬಹಳ ವರ್ಷದ ನಿರಂತರ ಅಭ್ಯಾಸದ ಫಲ ಎನ್ನುವುದು ಸಾಬೀತಾಗಿತ್ತು.ಭರತನಾಟ್ಯ ನೃತ್ಯ ಪ್ರಾಕಾರದಲ್ಲಿ ಒಂದಾದ ವರ್ಣಂ ಅನ್ನು ಪ್ರತಿಯೊಂದು ಕಲಾವಿದರು ಬಹಳ ಸುಲಲಿತ ವಾಗಿ ನೃತ್ತಿಸಿದರು. ಹಾಗೆಯೇ ದೇವರನಾಮ,ಕೃತಿ, ಪದಂ ಜಾವಳಿ ,ಕಾವಡಿ,ತಿಲ್ಲಾನ ಹೀಗೆ ಎಲ್ಲಾ ಬಗೆಯ ನೃತ್ಯಗಳನ್ನು ಅದ್ಭುತವಾಗಿ ನರ್ತಿಸಿ ಕಲಾರಸಿಕರ ಮನಸೆಳೆದರು.